ಶ್ರೀ ಚೈತನ್ಯ ಮಹಾಪ್ರಭುಗಳು ಯಾರು? (Shri Chaitanya Mahaprabhugalu Yaru)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಯುಗಯುಗಗಳಲ್ಲಿ, ಅನೇಕ ಅವತಾರಗಳು - ದೈವ ಪ್ರೇರಿತ ಶಿಕ್ಷಕರು ಮತ್ತು ದೇವರ ಅವತಾರಗಳು - ಜಗತ್ತಿನಲ್ಲಿ ಪ್ರಕಟವಾಗಿದ್ದಾರೆ, ಆದರೆ ಯಾರೂ ಕೂಡಾ ಆಧ್ಯಾತ್ಮಿಕ ಪ್ರೇಮವನ್ನು ಸುವರ್ಣಾವತಾರವಾದ ಭಗವಾನ್ ಚೈತನ್ಯ ಮಹಾಪ್ರಭುಗಳು ವಿತರಿಸಿದಂತೆ ಮುಕ್ತವಾಗಿ ವಿತರಿಸಿಲ್ಲ. ಚೈತನ್ಯ ಮಹಾಪ್ರಭುಗಳು (ಮಹಾಪ್ರಭು ಎಂದರೆ ‘‘ಮಹಾ ಪ್ರಭು ಅಥವಾ ಮಹಾ ಒಡೆಯ”) 1486 ರಲ್ಲಿ ಭಾರತದ ಬಂಗಾಳದಲ್ಲಿ ಆವಿರ್ಭವಿಸಿದರು, ಮತ್ತು ಅವರು 48 ವರ್ಷಗಳ ಕಾಲ ಇದ್ದರು, ಆದಾಗ್ಯೂ ಲಕ್ಷಾಂತರ ಜನರ ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರಿರುವ ಆಧ್ಯಾತ್ಮಿಕ ಪ್ರಜ್ಞೆಯಲ್ಲಿನ ಒಂದು ಕ್ರಾಂತಿಯನ್ನು ಅವರು ಪ್ರಾರಂಭಿಸಿದರು. ತಮ್ಮ ಯೌವನದಲ್ಲಿಯೂ ಒಬ್ಬ ಮಹಾನ್ ಸಂತನಾಗಿ ಹೆಸರುವಾಸಿಯಾಗಿದ್ದ ಭಗವಾನ್ ಚೈತನ್ಯರು, ಭಾರತದಾದ್ಯಂತ ಪ್ರಾಚೀನ ವೈದಿಕ ವಿವೇಚನೆಯ ಮರೆತುಹೋಗಿದ್ದ ಸಾರವನ್ನು ಕಲಿಸಲು 24 ನೆಯ ವಯಸ್ಸಿನಲ್ಲಿ ತಮ್ಮ ಕುಟುಂಬವನ್ನು ತೊರೆದರು. ಅವರು ಸ್ವತಃ ಓರ್ವ ಸರ್ವಸಂಗ ಪರಿತ್ಯಾಗಿ ಯೋಗಿಯಾಗಿದ್ದರೂ ಕೂಡಾ, ಒಬ್ಬಾತನು ತನ್ನ ಮನೆಯೊಳಗೆ, ಉದ್ಯೋಗದಲ್ಲಿ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿಯೂ ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಹೇಗೆ ವರ್ತಿಸಬಹುದು ಎಂಬುದನ್ನು ಕಲಿಸಿಕೊಟ್ಟರು. ಹೀಗೆ, ಅವರ ಬೋಧನೆಗಳು ಕಾಲಾತೀತವಾಗಿದ್ದರೂ, ಇಂದಿನ ಜಗತ್ತಿಗೆ ವಿಶೇಷ ಪ್ರಸಕ್ತತೆಯನ್ನು ಹೊಂದಿವೆ. ಶುದ್ಧ ಭಗವತ್ಪ್ರೇಮದ ಭಾವಪರವಶತೆಯನ್ನು ನೇರವಾಗಿ ಅನುಭವಿಸಲು ಯಾರುಬೇಕಾದರೂ ಮಾಡಬಲ್ಲ ಕಾರ್ಯಶೀಲ ಪ್ರಕ್ರಿಯೆಯನ್ನು ಅವರು ಕಲಿಸಿಕೊಟ್ಟರು. ಈ ಪುಸ್ತಕವು ಈ ಮಹಾನ್ ಸಂತರ ಅಸಾಧಾರಣ ಜೀವನದ ಬಗ್ಗೆ ಹೇಳುತ್ತದೆ ಮತ್ತು ಅವರ ಬೋಧನೆಗಳ ಸಾರವನ್ನು ವಿವರಿಸುತ್ತದೆ.
Sample Audio