ಸಾಂಖ್ಯಯೋಗ ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ (Sankya yoga - Devhuti putra Shri Kapilan Bodhana)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಲಕ್ಷಾಂತರ ವರ್ಷಗಳ ಹಿಂದೆ ಭಗವಾನ್ ಕೃಷ್ಣನ ಒಂದು ಅವತಾರವಾದ ಭಗವಾನ್ ಕಪಿಲರು ದೇವಾಹುತಿಯ ಮಗನಾಗಿ ಭೂಮಿಯ ಮೇಲೆ ಆವಿರ್ಭವಿಸಿದರು. ದೇವಾಹುತಿಯ ಪತಿಯು ಮನೆಯನ್ನು ತ್ಯಜಿಸಿ ಅರಣ್ಯಕ್ಕೆ ಹೋದಾಗ, ಭಗವಾನ್ ಕಪಿಲರು ತನ್ನ ಸಾಧ್ವಿ ತಾಯಿಗೆ ಸಾಂಖ್ಯ ಪದ್ಧತಿಯನ್ನು – ಜಡ ವಸ್ತುವಿನ, ಬ್ರಹ್ಮಾಂಡದ, ಪ್ರಜ್ಞೆಯ ಮನೋವಿಜ್ಞಾನದ ಮತ್ತು ಎಲ್ಲದರ ಅಂತಿಮ ಮೂಲದ ಒಂದು ವಿಶ್ಲೇಷಣಾತ್ಮಕ ಅಧ್ಯಯನದ ತಾತ್ವಿಕ ಪದ್ಧತಿಯನ್ನು ವಿವರಿಸಿದರು. ತಾನು ನಿಜವಾಗಿಯೂ ಯಾರು ಎಂಬುದರ ಕುರಿತಾದ, ಸೃಷ್ಟಿಕರ್ತನ ಕುರಿತಾದ ಮತ್ತು ನಿಜವಾದ ಸಂತೋಷದ ಕುರಿತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಮನುಷ್ಯನು ಎಸಗುತ್ತಿರುವ ಅನ್ವೇಷಣೆಯಲ್ಲಿ ಸಾಂಖ್ಯ ಪದ್ಧತಿ ಹಾಗೂ ಭಗವಾನ್ ಕಪಿಲರ ಬೋಧನೆಗಳು ಹೇಗೆ ಇಂದಿಗೂ ಕೂಡಾ ಪ್ರಸಕ್ತವಾಗಿವೆ ಎಂಬುದನ್ನು ವೈದಿಕ ವಿವೇಚನೆಯ ಪ್ರವರ್ತಕರಲ್ಲಿ ವಿಶ್ವದಲ್ಲೇ ಅಗ್ರಗಣ್ಯರಾದ ಶ್ರೀಲ ಪ್ರಭುಪಾದರು ಈ ಪುಸ್ತಕದಲ್ಲಿ ತೋರಿಸಿಕೊಡುತ್ತಾರೆ.
Sample Audio