ಸನಾತನ ಧರ್ಮ ಏಕೆ? ಏನು? (Sanatana Dharma ekay enu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಕಳೆದ ಶತಮಾನಗಳಲ್ಲಿ ಮಾನವರು ಹೇಗೆ ಪ್ರಗತಿ ಸಾಧಿಸಿದ್ದಾರೆಂದು ಕೇಳಿದರೆ, ಹೆಚ್ಚಿನ ಜನರು ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ಅವುಗಳು ತಂದಿರುವ ಜ್ಞಾನ ಮತ್ತು ಸುಖಸಾಧನಗಳ ಕಡೆಗೆ ಬೆರಳು ತೋರಿಸುತ್ತಾರೆ. ಆದರೆ ಸಂತೋಷ ಮತ್ತು ಶಾಶ್ವತ ಜೀವನಕ್ಕಾಗಿನ ಆತ್ಮದ ಬಯಕೆಯನ್ನು ಈ ವಿಷಯಗಳು ಹೇಗೆ ಪೂರೈಸುತ್ತವೆ. ಇಪ್ಪತ್ತನೆಯ ಶತಮಾನದ ಶ್ರೇಷ್ಠ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಕೃಷ್ಣ ಕೃಪಾ ಮೂರ್ತಿ ಎ.ಸಿ.ಭಕ್ತಿವೇದಾಂತ ಸ್ವಾಮಿಗಳು ನಾವು ನಮ್ಮ ನಿಜವಾದ ಹಾತೊರೆತ ಮತ್ತು ಅಗತ್ಯತೆಗಳೆಡೆಗೆ ಕುರುಡರಾಗಬಾರದೆಂದು ನಮ್ಮಲ್ಲಿ ಮೊರೆಯಿಡುತ್ತಾರೆ. ತಂತ್ರಜ್ಞಾನ ಮತ್ತು ವಿಜ್ಞಾನಗಳು ಒಳ್ಳೆಯವೇ ಸರಿ ಮತ್ತು ಅವುಗಳಿಗೆ ತಮ್ಮದೇ ಆದ ಸ್ಥಾನವು ಇದೆ, ಆದರೆ ಅವು ನಮ್ಮ ಅತ್ಯಂತ ಪ್ರಮುಖ ಗುರಿಯಾಗಿರುವ: ವಿಶ್ವಾತೀತರಾಗುವುದು ಮತ್ತು ನಮ್ಮ ಅಧ್ಯಾತ್ಮಿಕ ಸ್ವಭಾವವನ್ನು ಜಾಗೃತಗೊಳಿಸುವುದು – ಇದರಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯಬಾರದು.
Sample Audio