ಪರಿಪೂರ್ಣತೆಯ ಪಥ (Paripurnataya patha)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಆತ್ಮ-ತೃಪ್ತಿ ಮತ್ತು ಅದನ್ನು ಸಾಧಿಸುವ ವಿಧಾನವನ್ನು ಹುಡುಕುತ್ತಿರುವ ಸಮಕಾಲೀನ, ಚಿಂತನಶೀಲ ಓದುಗನು ಈ ಪುಸ್ತಕವನ್ನು ಒಂದು ಸ್ವಾಗತಾರ್ಹ ಪರಿಹಾರವಾಗಿ ಕಾಣುತ್ತಾನೆ. ಯೋಗದ (ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಇರುವ ಮಾನವಕುಲದ ಅತ್ಯಂತ ಪುರಾತನ ವ್ಯವಸ್ಥೆಯ) ತತ್ವಶಾಸ್ತ್ರ ಮತ್ತು ಆಚರಣೆಯ ಸ್ಪಷ್ಟ, ಆಸಕ್ತಿದಾಯಕ ವಿವರಣೆಯನ್ನು ಒಬ್ಬಾತನು ಇದರಲ್ಲಿ ಕಾಣಬಹುದು. ಕೃಷ್ಣ ಕೃಪಾ ಮೂರ್ತಿ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು (1896-1977) ಭಗವದ್ಗೀತೆಯಲ್ಲಿ ವಿವರಿಸಲಾಗಿರುವಂತೆ ಯೋಗದ ತತ್ತ್ವಶಾಸ್ತ್ರವನ್ನು ಸ್ಪಷ್ಟಪಡಿಸುತ್ತಾರೆ. ಅರ್ಜುನನು ತನ್ನ ಗುರುತು ಮತ್ತು ಉದ್ದೇಶದ ಬಗ್ಗೆ ದಿಗ್ಭ್ರಾಂತನಾಗಿ ಗೊಂದಲಕ್ಕೊಳಗಾಗಿ ಕೃಷ್ಣನ ಕಡೆಗೆ ತಿರುಗಿದಾಗ, ಕೃಷ್ಣನು ತನ್ನ ಸಮರ್ಥ ವಿದ್ಯಾರ್ಥಿಗೆ “ಪರಿಪೂರ್ಣತೆಯ ಪಥವನ್ನು” ಬಹಿರಂಗಪಡಿಸುವ ದೃಶ್ಯವನ್ನು ಗೀತೆಯು ವರ್ಣಿಸುತ್ತದೆ. ಭಗವಾನ್ ಕೃಷ್ಣನ ಬೋಧನೆಗಳ ಸಾರವೆಂದರೆ, ಒಬ್ಬಾತನು ತನ್ನ ಜೀವನವನ್ನು ಭಕ್ತಿ-ಯೋಗದ, ಅಂದರೆ ವೈಯಕ್ತಿಕ ಪ್ರಜ್ಞೆ ಮತ್ತು ಸರ್ವೋಚ್ಚ ಪ್ರಜ್ಞೆಯ ನಡುವಿನ ಯೋಗಯುಕ್ತತೆಯ ಆಚರಣೆಯ ಮೇಲೆ ಕೇಂದ್ರೀಕರಿಸಬೇಕು. ಈ ಐತಿಹಾಸಿಕ ಸಂಭಾಷಣಾ ಸರಣಿಯ ಮೂಲಕ, ಶ್ರೀಲ ಪ್ರಭುಪಾದರು ಭಕ್ತಿ-ಯೋಗದ ವಿಧಾನಗಳ ಒಂದು ಮೇಧಾವಿ ನಿರೂಪಣೆಯನ್ನು ನೀಡುತ್ತಾರೆ, ಮತ್ತು ಈ ಮೂಲಕ ಈ ಸರಳವಾದ ಆದರೆ ಎಲ್ಲವನ್ನೂ ಒಳಗೊಂಡಿರುವ ಯೋಗದ ಸಾರ್ವತ್ರಿಕ ಅನ್ವಯಿಸುವಿಕೆಯನ್ನು ಬಹಿರಂಗಪಡಿಸುತ್ತಾರೆ. ಆಧುನಿಕ-ಕಾಲದ ಭೌತಿಕ ಜೀವನದ ಸಂಕೀರ್ಣತೆ ಮತ್ತು ಅವ್ಯವಸ್ಥೆಯಲ್ಲಿ ಸಿಲುಕಿಕೊಂಡಿರುವವರೂ ಕೂಡಾ ತಮ್ಮ ಮನಸ್ಸನ್ನು ಶುದ್ಧೀಕರಿಸಲು ಮತ್ತು ಪ್ರಜ್ಞೆಯನ್ನು ಅಂತಿಮ ಸಂತೋಷದ ಸ್ಥಿತಿಗೆ ಏರಿಸಲು ಈ ನೇರ ಆಚರಣೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿಕೊಡುತ್ತಾರೆ.
Sample Audio