ನೈಸರ್ಗಿಕ ನಿಯಮಗಳು (Naisargika niyamagalu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಒಂದು ದೋಷರಹಿತ ನ್ಯಾಯ ಬಿಕ್ಷೆ ಬೇಡಿ, ಕಳ್ಳತನ ಮಾಡಿ ಅಥವಾ ಕೊಂಡು ಪಡೆಯಿರಿ, ಲಂಚ ತೆಗೆದುಕೊಳ್ಳಿ ಅಥವಾ ಮೋಸ ಮಾಡಿ, ಹೇಗಾದರೂ ಮಾಡಿ ಹಣವನ್ನು ಗಳಿಸಿರಿ ಮತ್ತು ಮಜಾ ಮಾಡಿರಿ. ಇಲ್ಲವಾದಲ್ಲಿ ಕಡೆಯ ಪಕ್ಷ ಬದುಕುಳಿಯಿರಿ. ಏನೇ ಆಗಲಿ ಮುನ್ನುಗ್ಗಬೇಕೆಂಬ ಹುಚ್ಚು ನುಗ್ಗಾಟದಲ್ಲಿ, ನಮ್ಮ ಕಾರ್ಯಗಳ ಹೊಣೆಗಾರಿಕೆಯು ನಮ್ಮದಾಗಿರಬಹುದು ಎಂಬುದನ್ನು ಪರಿಗಣಿಸಲು ನಾವು ಎಂದಾದರೂ ನಿಲ್ಲುತ್ತೇವೆಯೇ? ಶಾಸ್ತ್ರಗಳಲ್ಲಿ ವಿವರಿಸಲಾಗಿರುವ ನರಕದ ಶಿಕ್ಷೆಗಳು ನಿಜವಾಗಿದ್ದರೆ ಏನು ಗತಿ? ಈ ಪುಸ್ತಕದಲ್ಲಿ, ಇಪ್ಪತ್ತನೆಯ ಶತಮಾನದ ಶ್ರೇಷ್ಠ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಶ್ರೀಲ ಪ್ರಭುಪಾದರು ಪಾಪವೆಂದರೇನು, ಮತ್ತು ಯಾರು ಯಾವುದಕ್ಕೆ ಶಿಕ್ಷೆ ಪಡೆಯುತ್ತಾರೆ ಎಂಬುದನ್ನು ವಿವರಿಸುತ್ತಾರೆ. ಈ ಪುಸ್ತಕದ ತೀರ್ಮಾನವನ್ನು ಯಾರೂ ತಪ್ಪಿಸಲಾರರು: ಹೆಚ್ಚಿನ ಜನರು ಬಹಳ ಅಹಿತಕರ ಭವಿಷ್ಯದತ್ತ ಸಾಗುತಿದ್ದಾರೆ. ಇದು ತಮಾಷೆಯ ವಿಚಾರವಲ್ಲ. ಬಹುಶಃ ನೀವು ಈ ಪುಸ್ತಕವನ್ನು ಓದಬೇಕು. ಮತ್ತು ಬಹಳ ತಡವಾಗುವ ಮುನ್ನ, ನಿಮ್ಮ ಜೀವನವನ್ನು ಸರಿಗೊಳಿಸಲು ಏನು ಮಾಡಬೇಕೆಂಬುದನ್ನು ಕಂಡುಕೊಳ್ಳಬೇಕು.
Sample Audio