This Portal is Connected to Production Database.

Kannada Language Pack
Thumbnail Image of ಕೃಷ್ಣ ದೇವೋತ್ತಮ ಪರಮ ಪುರುಷ

ಕೃಷ್ಣ ದೇವೋತ್ತಮ ಪರಮ ಪುರುಷ (Krishna Devottama parama purusha)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

5,000 ವರ್ಷಗಳ ಹಿಂದೆ ಭೂಮಿಯ ಮೇಲೆ ಅವತರಿಸಿದ ಶ್ರೀ ಕೃಷ್ಣನ ಅಸಾಧಾರಣ ಲೀಲೆಗಳ ಮೂಲ ದಾಖಲೆಯು ಇದಾಗಿದೆ. ಅವನು ಶತಮಾನಗಳುದ್ದಕ್ಕೂ ಜನರನ್ನು ಏಕೆ ಮೋಡಿ ಮಾಡಿರುವನು ಎಂಬುದರ ಕಾರಣವನ್ನು ಕಂಡುಕೊಳ್ಳಿ. ಭಗವಂತನಾದ ಕೃಷ್ಣನನ್ನು ಯಾವಾಗಲೂ ಸ್ಮರಿಸಿ. ಸಾವಿರಾರು ವರ್ಷಗಳುದ್ದಕ್ಕೂ ಭಾರತದಲ್ಲಿ ಪ್ರವರ್ಧಮಾನದಲ್ಲಿದ್ದ ಶ್ರೀಮಂತ ಆಧ್ಯಾತ್ಮಿಕ ಸಂಸ್ಕೃತಿಯ ಗುರಿಯು ಇದೇ ಆಗಿತ್ತು. ಕಲೆ, ವಾಸ್ತುಶಿಲ್ಪ, ನಾಟಕ, ಸಂಗೀತ, ನೃತ್ಯ ಮತ್ತು ತತ್ತ್ವಶಾಸ್ತ್ರದ ಸ್ಮಾರಕ ಸಾಧನೆಗಳ ಮೂಲಕ ಶ್ರೀ ಕೃಷ್ಣನನ್ನು ಇಂದಿಗೂ ಕೂಡಾ ಸ್ಮರಿಸಲಾಗುತ್ತಿದೆ ಮತ್ತು ಸ್ತುತಿಸಲಾಗುತ್ತಿದೆ. ಐವತ್ತು ಶತಮಾನಗಳ ಹಿಂದೆ ಕೃಷ್ಣನು ತನ್ನ ಶಾಶ್ವತ ಆಧ್ಯಾತ್ಮಿಕ ಲೀಲೆಗಳನ್ನು ನಮಗೆ ತೋರಿಸಲು ಅಲೌಕಿಕ ಪ್ರಪಂಚದಿಂದ ಅವತರಿಸಿದನು. ಅವನ ಕಾರ್ಯಗಳು ದೇವರ ಪೂರ್ಣ ವಿಚಾರವನ್ನು ಬಹಿರಂಗಪಡಿಸುತ್ತವೆ ಮತ್ತು ಆತನೊಂದಿಗೆ ಮತ್ತೆ ಸೇರಲು ನಮ್ಮನ್ನು ಆಕರ್ಷಿಸುತ್ತವೆ. ಅವುಗಳು ಧ್ಯಾನದ ವಾಸ್ತವ ವಿಷಯಗಳಾಗಿವೆ. ಶ್ರೀ ಕೃಷ್ಣನ ಜೀವನವು ಮೋಹಕ ಮತ್ತು ಬಹಳಷ್ಟು ಮನರಂಜನೀಯವಾಗಿದೆ -ಮಕ್ಕಳೂ ಕೂಡಾ ಕಥೆಗಳನ್ನು ಇಷ್ಟಪಡುತ್ತಾರೆ. ಅವನ ಜೀವನವು ಗಾಢವಾದ ತಾತ್ವಿಕ ವಿವೇಚನೆ ಮತ್ತು ಆಧ್ಯಾತ್ಮಿಕ ಅಂತರ್ದೃಷ್ಟಿಯಿಂದ ತುಂಬಿದೆ, ಮತ್ತು ಇದು ಭಗವಂತನ ವ್ಯಕ್ತಿತ್ವ, ಚಿಂತನೆಗಳು ಹಾಗೂ ಭಾವನೆಗಳನ್ನು ಅರಿಯಲು ಒಂದು ಕಿಟಕಿಯಾಗಿದೆ. ಈ ಪುಸ್ತಕವನ್ನು ಓದಲು ಸಮಯ ತೆಗೆದುಕೊಳ್ಳುವ ಯಾರೇ ಆದರೂ ಸಮಕಾಲೀನ ಮಾನವ ಕಾಳಜಿಗಳಿಗೆ ಇದು ಹೊಂದಿರುವ ಪ್ರಸಕ್ತತೆಯಿಂದ ಪ್ರಭಾವಿತರಾಗುತ್ತಾರೆ.

Sample Audio

Copyright © 1972, 2022 BHAKTIVEDANTA BOOK TRUST (E 5032)