ಜೀವದ ಮೂಲ ಜೀವ (jeevada moola jeeva)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಈ ಪುಸ್ತಕವು ಆಧುನಿಕ ವಿಜ್ಞಾನ ಮತ್ತು ವಿಜ್ಞಾನಿಗಳ ಕೆಲ ಪುರ್ವಾಗ್ರಹಗಳ ಮತ್ತು ವಿಚಾರಗಳ ಅದ್ಭುತ ಆಶು ವಿಮರ್ಶೆಯಾಗಿದೆ. ನಾವು ಸುತ್ತಲೂ ನೋಡುವ ಎಲ್ಲವೂ ಜಡವಸ್ತುವಿನಿಂದ ಮಾಡಲ್ಪಟ್ಟಿದೆ, ಮತ್ತು ಜೀವವಿಜ್ಞಾನ, ಶರೀರವಿಜ್ಞಾನ, ಮನೋವಿಜ್ಞಾನ ಹಾಗೂ ವಿಶ್ವವಿಜ್ಞಾನ ಸೇರಿದಂತೆ ಎಲ್ಲಾ ನೈಸರ್ಗಿಕ ವಿದ್ಯಮಾನಗಳನ್ನು ಅಂತಿಮವಾಗಿ ಭೌತಿಕ ಮತ್ತು ರಾಸಾಯನಿಕ ನಿಯಮಗಳಿಗೆ ಒಳಪಟ್ಟಿರುವ ಎಲೆಕ್ಟ್ರಾನು ಹಾಗೂ ಪ್ರೋಟಾನು ಮುಂತಾದ ಮೂಲ ಕಣಗಳ ಕಾರ್ಯವೈಖರಿಯ ಪ್ರಕಾರ ಬಿಡಿಬಿಡಿಸಿ ವಿವರಿಸಬಹುದು ಎಂಬ ವಿಚಾರವನ್ನು ವಿಜ್ಞಾನವು ಬಹಳ ಹಿಂದಿನಿಂದಲೂ ಊಹಿಸಿದೆ ಮತ್ತು ಬೆಂಬಲಿಸಿದೆ. ಇಪ್ಪತ್ತನೆಯ ಶತಮಾನದ ಶ್ರೇಷ್ಠ ದಾರ್ಶನಿಕರು ಮತ್ತು ವಿದ್ವಾಂಸರಲ್ಲಿ ಅಗ್ರಗಣ್ಯರಾದ ಶ್ರೀಲ ಪ್ರಭುಪಾದರು ಜೀವನದ ಉದ್ಗಮ (ಒರಿಜಿನ್ ಆಫ್ ಲೈಫ್) ಮತ್ತು ಜೈವಿಕ ಜೀವರಾಶಿಗಳ ವೈವಿಧ್ಯತೆ (ವಿಕಾಸ ವಾದ) ಎಂಬ ಆಧುನಿಕ ವಿಜ್ಞಾನದ ಎರಡು ಪ್ರಮುಖ ವಾದಗಳಿಗೆ ಆಧಾರವಾಗಿರುವ ಗುಪ್ತ ಮತ್ತು ಆಧಾರರಹಿತ ಊಹೆಗಳನ್ನು ವಿಶ್ಲೇಷಿಸುತ್ತಾರೆ ಮತ್ತು ಬಹಿರಂಗಪಡಿಸುತ್ತಾರೆ.
Sample Audio