ಭಕ್ತಿ ರಸಾಮೃತ ಸಿಂಧು ಭಕ್ತಿಯೋಗದ ಸಂಪೂರ್ಣ ವಿಜ್ಞಾನ (Bhakti rasamrita sindhu)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಪ್ರಕೃತಿಯಲ್ಲಿನ ಸರಳತೆ, ಸೌಂದರ್ಯ ಮತ್ತು ಜಟಿಲತೆಗಳು ಸಮಯದುದ್ದಕ್ಕೂ ಶ್ರೇಷ್ಠ ದಾರ್ಶನಿಕರ ಮನಸ್ಸು ಮತ್ತು ಹೃದಯಗಳನ್ನು ಆಕರ್ಷಿಸಿವೆ. ಭಾರತದ ಕಾಲಾತೀತ ವೈದಿಕ ಸಾಹಿತ್ಯದ ವಿಶಾಲವಾದ ನಿಧಿಯಲ್ಲಿರುವ ಎಲ್ಲಾ ಶ್ರೇಷ್ಠ ಕೃತಿಗಳಲ್ಲಿ, ಶ್ರೀಮದ್-ಭಾಗವತವು ಅತ್ಯಂತ ಭವ್ಯ ಮತ್ತು ಅಮೂಲ್ಯವಾದದ್ದು, ಏಕೆಂದರೆ ಇದು ಆಧ್ಯಾತ್ಮಿಕ ಸತ್ಯದ ಸಾರವನ್ನು ಸುಂದರವಾದ ಕಾವ್ಯದಲ್ಲಿ ಸಾಕಾರಗೊಳಿಸುತ್ತದೆ. ಈ ಅನುಪಮ ಅತ್ಯುತ್ಕೃಷ್ಟ ಕೃತಿಯ ಹತ್ತನೆಯ ಸ್ಕಂದದಲ್ಲಿ ಅಲೌಕಿಕ ವಿವೇಕದ ವಿವಿಧ ಅಂಶಗಳನ್ನು ವಿಶದಗೊಳಿಸಲು ಭಾರತದ ಮಳೆಗಾಲದ ಶರತ್ಕಾಲವನ್ನು ಒಂದು ವಿಸ್ತೃತ ರೂಪಕಾಲಂಕಾರವಾಗಿ ವಿವರಿಸಲಾಗಿದೆ. ಉದಾಹರಣೆಗೆ, ಚಂದ್ರ ಮತ್ತು ನಕ್ಷತ್ರಗಳನ್ನು ಮುಸುಕುಗೊಳಿಸುವ ಶರತ್ಕಾಲದ ರಾತ್ರಿಯ ಮೋಡಭರಿತ ಆಕಾಶಗಳು, ಮಾನವನ ಮನಸ್ಸಿನಿಂದ ನಿಜವಾದ ವಿವೇಕವನ್ನು ಮರೆಮಾಚುವ ಪ್ರಸ್ತುತ ಕಾಲದ ಭೌತವಾದವನ್ನು ಪ್ರತಿನಿಧಿಸುತ್ತವೆ. ಇಪ್ಪತ್ತನೆಯ ಶತಮಾನದ ಶ್ರೇಷ್ಠ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಶ್ರೀಲ ಪ್ರಭುಪಾದರು, ಪ್ರಕೃತಿ ಮತ್ತು ಅದರ ಉದ್ಗಮದ ಉದ್ದೇಶ ಮತ್ತು ಮಹತ್ವದ ಸ್ಪಷ್ಟ ಮತ್ತು ವಾಸ್ತವ ವಿಷದೀಕರಣವನ್ನು ಪ್ರಸ್ತುತಪಡಿಸುತ್ತಾರೆ. ಈ ಪುಸ್ತಕವು ಭಾರತದ ತತ್ತ್ವಶಾಸ್ತ್ರವನ್ನು ಸುಂದರವಾದ ಚೀನೀ ಕಲೆ ಮತ್ತು ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ಸೆರೆಹಿಡಿದಿದೆ.
Sample Audio