ಭಗವದ್ಗೀತಾ ಯಥಾರೂಪ (Bhagavad Gita Yatha Roopa)
Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
Description
ಭಗವದ್ಗೀತೆಯು ಭಾರತದ ಆಧ್ಯಾತ್ಮಿಕ ವಿವೇಕದ ರತ್ನವಾಗಿ ಸಾರ್ವತ್ರಿಕವಾಗಿ ಪ್ರಸಿದ್ಧವಾಗಿದೆ. ದೇವೋತ್ತಮ ಪರಮ ಪುರುಷನಾದ ಭಗವಾನ್ ಕೃಷ್ಣನು ತನ್ನ ಆತ್ಮೀಯ ಭಕ್ತನಾದ ಅರ್ಜುನನಿಗೆ ಹೇಳಿದ ಗೀತೆಯ ಏಳುನೂರು ಸಂಕ್ಷಿಪ್ತ ಶ್ಲೋಕಗಳು ಆತ್ಮ-ಸಾಕ್ಷಾತ್ಕಾರದ ವಿಜ್ಞಾನಕ್ಕೆ ಒಂದು ನಿರ್ಣಾಯಕ ಮಾರ್ಗಸೂಚಿಯನ್ನು ನೀಡುತ್ತವೆ. ವಾಸ್ತವವಾಗಿ, ಮನುಷ್ಯನ ಮೂಲ ಸ್ವರೂಪ, ಅವನ ಪರಿಸರ ಮತ್ತು ಅಂತಿಮವಾಗಿ ಭಾಗವಂತನೊಂದಿಗಿನ ಅವನ ಸಂಬಂಧಗಳ ಕುರಿತಾದ ಅದರಲ್ಲಿನ ದಿವ್ಯದರ್ಷನಕ್ಕೆ ಬೇರೆ ಯಾವ ಕೃತಿಯೂ ಸರಿಸಾಟಿಯಾಗಲಾರದು. ವಿಶ್ವದ ಅಗ್ರಗಣ್ಯ ವೈದಿಕ ವಿದ್ವಾಂಸರು ಮತ್ತು ಶಿಕ್ಷಕರಾದ ಕೃಷ್ಣ ಕೃಪಾ ಮೂರ್ತಿ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಭಗವಾನ್ ಕೃಷ್ಣನಿಂದಲೇ ಮೊದಲ್ಗೊಂಡಿರುವ ಸಂಪೂರ್ಣ ಆತ್ಮ-ಸಾಕ್ಷಾತ್ಕಾರವನ್ನು ಪಡೆದಿರುವ ಆಧ್ಯಾತ್ಮಿಕ ಗುರುಗಳ ಅವಿಚ್ಛಿನ್ನ ಪರಂಪರೆಯನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ, ಗೀತೆಯ ಇತರ ಆವೃತ್ತಿಗಳಿಗಿಂತ ಭಿನ್ನವಾಗಿ, ಅವರ ಆವೃತ್ತಿಯು ಭಗವಾನ್ ಕೃಷ್ಣನ ಗಾಢವಾದ ಸಂದೇಶವನ್ನು ಯಥಾರೂಪವಾಗಿ – ಕಿಂಚಿತ್ತೂ ಕಲಬೆರಕೆ ಅಥವಾ ಸ್ವಾರ್ಥ ಪ್ರೇರಿತ ಬದಲಾವಣೆಗಳಿಲ್ಲದೆ ತಿಳಿಸಿಕೊಡುತ್ತದೆ.
Sample Audio