This Portal is Connected to Production Database.

Kannada Language Pack
Thumbnail Image of ಆತ್ಮ ಸಾಕ್ಷಾತ್ಕಾರ ವಿಜ್ಞಾನ

ಆತ್ಮ ಸಾಕ್ಷಾತ್ಕಾರ ವಿಜ್ಞಾನ (Atma Sakshatara vejnana)

Author: ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

Description

ಗಾಢವಾದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಂವೇದನಶೀಲತೆಯುಳ್ಳ ಓರ್ವ ನಿಜವಾದ ಸಾಧುವಾಗಿದ್ದ ಶ್ರೀಲ ಪ್ರಭುಪಾದರು ಆಧ್ಯಾತ್ಮಿಕವಾಗಿ ವಂಚಿತವಾಗಿರುವ ನಮ್ಮ ಸಮಾಜಕ್ಕೆ ಆಳವಾದ ಕಾಳಜಿ ಮತ್ತು ಸಹಾನುಭೂತಿಯನ್ನು ಹೊಂದಿದ್ದರು. ಮಾನವೀಯತೆಯ ಜ್ಞಾನೋದಯಕ್ಕಾಗಿ, ಅವರು, ಆತ್ಮ-ಸಾಕ್ಷಾತ್ಕಾರವನ್ನು ಸಾಧಿಸಿದ್ದ ಇತರ ಮಹಾನ್ ಶಿಕ್ಷಕರು ಸಹಸ್ರಾರು ವರ್ಷಗಳ ಕಾಲ ಮಾತನಾಡಿರುವ ಅದೇ ಕಾಲಾತೀತ ಜ್ಞಾನವನ್ನು – ಅಂದರೆ ಆತ್ಮದ, ಪ್ರಕೃತಿಯ, ಬ್ರಹ್ಮಾಂಡದ ಹಾಗೂ ಅಂತರ್-ಬಹಿರ್ ಸ್ಥಿತನಾಗಿರುವ ಪರಮಾತ್ಮನ ಕುರಿತಾದ ರಹಸ್ಯಗಳನ್ನು ತೆರೆದಿಡುವ ಜ್ಞಾನವನ್ನು ಆಧುನಿಕ ಇಂಗ್ಲಿಷಿಗೆ ಅನುವಾದ ಮಾಡಿದರು. "ಆತ್ಮ ಸಂಶೋಧನೆ"ಯ ಕುರಿತು ಓರ್ವ ಪ್ರಸಿದ್ಧ ಹೃದ್ರೋಗ ತಜ್ಞರೊಂದಿಗಿನ ಶ್ರೀಲ ಪ್ರಭುಪಾದರ ತೀಕ್ಷ್ಣವಾದ ಸಂವಾದದಿಂದ ಹಿಡಿದು, ಪುನರ್ಜನ್ಮದ ಕುರಿತು ಲಂಡನ್ ಬ್ರಾಡ್‌ಕಾಸ್ಟಿಂಗ್ ಕಂಪನಿಗೆ ಅವರು ನೀಡಿದ ದಿವ್ಯದರ್ಶನಗಳು, ನೈಜ ಮತ್ತು ಬೋಗಸ್ ಗುರುಗಳ ಕುರಿತು ಲಂಡನ್ ಟೈಮ್ಸ್‌ಗೆ ಅವರು ನೀಡಿದ ಸತ್ಯವಾಕ್ ಗಳು, ಕೃಷ್ಣ ಮತ್ತು ಯೇಸುಕ್ರಿಸ್ತನ ಕುರಿತಾದ ಓರ್ವ ಜರ್ಮನ್ ಬೆನೆಡಿಕ್ಟೈನ್ ಸನ್ಯಾಸಿಯವರೊಂದಿಗಿನ ಅವರ ಸಂಭಾಷಣೆಯು, ಕರ್ಮದ ಕಾನೂನಿನ ಕುರಿತಾದ ಅವರ ಒಳನೋಟಗಳು, ಆಧ್ಯಾತ್ಮಿಕ ಸಮತಾವಾದದ ಬಗ್ಗೆ ರಷ್ಯಾದ ಓರ್ವ ಪ್ರಮುಖ ವಿದ್ವಾಂಸರೊಂದಿಗಿನ ಅವರ ಸಂಭಾಷಣೆಯು ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಈ ಮನಮೋಹಕ ಸಂಪುಟವು ಒಳಗೊಂಡಿದೆ. ಆತ್ಮ-ಸಾಕ್ಷಾತ್ಕಾರ ವಿಜ್ಞಾನವು ಆಂತರಿಕವಾಗಿ ಸ್ಫೂರ್ತಿ ಮತ್ತು ಜ್ಞಾನೋದಯದ ಕಿಚ್ಚಿನ್ನು ಹಚ್ಚುತ್ತದೆ, ಮತ್ತು ಆತ್ಮವು ದೈವತ್ವನ್ನು ಸೇರಲು ಅವನನ್ನು ಸಮರ್ಥಗೊಳಿಸುತ್ತದೆ.

Sample Audio

Copyright © 1972, 2022 BHAKTIVEDANTA BOOK TRUST (E 5032)